ಆಸಿಸ್ ಮಹಿಳಾ ತಂಡಕ್ಕೆ ವಿಶ್ವಕಪ್ ಕಿರೀಟ 

ನ್ಯೂಜಿಲೆಂಡ್ : ಇಲ್ಲಿ ನಡೆದ 12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವನಿತೆಯರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕ್ರಿಸ್ಟ್‌ಚರ್ಚ್‌ನ ಹೇಗ್ಲೆ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ  71 ರನ್‌ಗಳ ಅಮೋಘ ಗೆಲುವು ಸಾಧಿಸಿದೆ. ಈ ಮೂಲಕ ದಾಖಲೆಯ ಏಳನೇ ಬಾರಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಮಹಿಳಾ ತಂಡ ೫೦ ಓವರ್‌ಗೆ ಬರೋಬ್ಬರಿ 356 ರನ್ ಸಿಡಿಸಿತು. ವಿಕೆಟ್ ಕೀಪರ್ ಬ್ಯಾಟರ್ ಅಲಿಸಾ ಹೀಲಿ ಅವರ ದಾಖಲೆ 170 ರನ್ ಮತ್ತು, ರಚೆಲ್ ಹೇನ್ಸ್ ಮತ್ತು ಬೆತ್ ಮೂನೆ ಅವರ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್‌ಗೆ ಕಠಿಣ ಟಾರ್ಗೆಟ್ ನೀಡಿತ್ತು. ಆದರೆ, ಆಂಗ್ಲರು 285ರನ್‌ಗೆ ಆಲೌಟ್ ಆಗುವ ಮೂಲಕ ರನ್ನರ್ ಅಪ್‌ಗೆ ತೃಪ್ತಿ ಪಟ್ಟಿತು.