ಹೈಲೆಟ್ಸ್:
ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ
ಸಿಸಿಟಿವಿಯಲ್ಲಿ ಹಲ್ಲೆಗೆ ಯತ್ನಿಸಿದ್ದು ದಾಖಲು
ಸಾಗರ ಪಟ್ಟಣದಲ್ಲಿ ನಡೆದ ಘಟನೆ
ಸುನೀಲ್ ಎಂಬಾತನ ಮೇಲೆ ಹಲ್ಲೆಗೆ ಯತ್ನ
ಶಿವಮೊಗ್ಗ:
ಸಾಗರದಲ್ಲಿ ಬಜರಂಗದಳದ ಕಾರ್ಯಕರ್ತ ಸುನೀಲ್ ಎಂಬಾತನ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಘಟನೆಯ ಕುರಿತ ಸಿಸಿಟಿವಿ ದೃಶ್ಯ ಕನ್ನಡ ಮೀಡಿಯಂಗೆ ಲಭ್ಯವಾಗಿದೆ. ಬೈಕ್‌ನಲ್ಲಿ ಹೋಗುವ ವೇಳೆ ಅಟ್ಯಾಕ್ ಮಾಡಲು ಮುಂದಾಗಿದ್ದಾನೆ. ಸುನೀಲ್ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾನೆ. ಸಾಗರ ಪಟ್ಟಣದ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಸಮೀರ್ ಎಂಬಾತನೇ ಹಲ್ಲೆ ಯತ್ನ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಹಿಜಾಬ್ ವಿಚಾರಕ್ಕೆ ಇಬ್ಬರ ನಡುವೆ ವೈಷ್ಯಮ್ಯವಿತ್ತು ಎಂದು ಹೇಳಲಾಗಿದೆ. ಇಬ್ಬರೂ ಸಾಗರ ಪಟ್ಟಣದ ಉಪ್ಪಾರಪೇಟೆಯ ನಿವಾಸಿಗಳಾಗಿದ್ದಾರೆ. ಈ ಕುರಿತು ಸಾಗರ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.