ಶಿವಮೊಗ್ಗದಲ್ಲಿ ಇಡಿ ಅಧಿಕಾರಿಗಳ ದಾಳಿ 

ಹೈಲೆಟ್ಸ್:

ಶಿವಮೊಗ್ಗದಲ್ಲಿ ಇಡಿ ಅಧಿಕಾರಿಗಳ ದಾಳಿ 

ತೀರ್ಥಹಳ್ಳಿಯಲ್ಲಿ ಉಗ್ರ ಶಾರಿಕ್ ಮನೆಯ ಮೇಲೆ ದಾಳಿ 

ಹಣದ ಮೂಲದ ಕುರಿತು ಅಧಿಕಾರಿಗಳ ಪರಿಶೀಲನೆ 

ಮಾಜಿ ಸಚಿವ ಕಿಮ್ಮನೆ ಕಚೇರಿಯಲ್ಲೂ ಪರಿಶೀಲನೆ 

ಶಾರಿಕ್ ಅಜ್ಜನಿಗೆ ಸೇರಿದ ಕಟ್ಟಡದಲ್ಲಿ ಕಾಂಗ್ರೆಸ್ ಕಚೇರಿ 

ಆ ಕುರಿತು ಇಡಿ ಅಧಿಕಾರಿಗಳಿಂದ ಪರಿಶೀಲನೆ 

ಶಿವಮೊಗ್ಗ: 
ಕುಕ್ಕರ್ ಬ್ಲಾಸ್ಟ್ ಪ್ರಕರಣದ ರೂವಾರಿ ಉಗ್ರ ಶಾರಿಕ್ ಹಣಕಾಸು ಮೂಲ ಪತ್ತೆ ಹಚ್ಚೋದ್ರದಲ್ಲಿ ಇಡಿ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ. ತೀರ್ಥಹಳ್ಳಿಯಲ್ಲಿನ ಶಾರಿಕ್ ಮನೆಯ ಮೇಲೂ ದಾಳಿ ನಡೆಸಲಾಗಿದೆ. ಹಲವಾರು ದಾಖಲೆಗಳನ್ನು ಪರಿಶೀಲನೆಯಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಈ ಹಿಂದೆ ಶಿವಮೊಗ್ಗದ ತುಂಗಾ ತೀರದಲ್ಲೂ ಟ್ರಯಲ್ ಬ್ಲಾಸ್ಟ್ ನಡೆಸಲಾಗಿತ್ತು. ಆ ಬಳಿಕ ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ನಡೆದಿದ್ದು. ಐಸಿಎಸ್ ಉಗ್ರರೊಂದಿಗೆ ನಂಟು ಹೊಂದಿದ ಆರೋಪವೂ ಶಾರಿಕ್ ವಿರುದ್ಧ ಇದೆ. ಸದ್ಯ ಇವರ ಹಣದ ಮೂಲ ಪತ್ತೆಯಲ್ಲಿ ಇಡಿ ಅಧಿಕಾರಿಗಳು ನಿರತರಾಗಿದ್ದಾರೆ. 

 

ಮಾಜಿ ಸಚಿವ ಕಿಮ್ಮನೆಯವರ ಕಾಂಗ್ರೆಸ್ ಕಚೇರಿಯಲ್ಲೂ ಪರಿಶೀಲನೆ ನಡೆಸಲಾಗಿದೆ. ಶಾರಿಕ್ ಅಜ್ಜನಿಗೆ ಸೇರಿದ ಕಟ್ಟಡದಲ್ಲಿ ಕಾಂಗ್ರೆಸ್ ಕಚೇರಿ ಇದ್ದು, ಇಲ್ಲೂ ಸಹ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ೧೦ ಲಕ್ಷ ಅಡ್ವಾನ್ಸ್ ಕೊಟ್ಟು, ಪ್ರತಿ ತಿಂಗಳು ಸಾವಿರ ರೂಪಾಯಿ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ಜೂನ್ ೩೦ರ ವರೆಗೆ ಅಗ್ರಿಮೆಂಟ್ ಇದೆ. ಆ ಬಳಿಕ ನಮ್ಮ ಅಡ್ವಾನ್ಸ್ ಹಣ ವಾಪಸ್ ಕೊಟ್ರೆ ಕಚೇರಿ ಖಾಲಿ ಮಾಡುತ್ತೇವೆ ಎಂದು ಅಧಿಕಾರಿಗಳ ಮುಂದೆ ಕಿಮ್ಮನೆ ರತ್ನಾಕರ್ ಅವರು ಸ್ಪಷ್ಟಪಡಿಸಿದ್ದಾರೆ. ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ ಮತ್ತು ದಾಖಲೆಯನ್ನು ಒದಗಿಸಲಾಗಿದೆ.