ಆಶಾ ಕಾರ್ಯಕರ್ತೆಯರ ಪ್ರತಿಭಟನೆ 

ಶಿವಮೊಗ್ಗ : ಮಾಸಿಕ ವೇತನವನ್ನು ಏರಿಕೆ ಮಾಡಬೇಕೆಂದು ಆಗ್ರಹಿಸಿ ಆಶಾ ಕಾರ್ಯಾಕರ್ತೆಯರು ಜಿಲ್ಲಾಧಿಕಾರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ನಮಗೆ 4 ಸಾವಿರ ಸಂಬಳ ನೀಡಲಾಗುತ್ತಿದೆ. ಅದನ್ನು ಏರಿಕೆ ಮಾಡಬೇಕು. ವೇತನ ಹೆಚ್ಚಿಸುವಂತೆ ಬಜೆಟ್‌ಗಿಂತ ಮುಂಚೆಯೇ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೆವು.

ಆದರೆ ಬಜೆಟ್‌ನಲ್ಲಿ ಕೇವಲ ಒಂದು ಸಾವಿರ ರೂಪಾಯಿ ವೇತನವನ್ನು ಮಾತ್ರ ಏರಿಸಲಾಗಿದೆ. ಹಳ್ಳಿ ಭಾಗದ ಕಾರ್ಯರ್ತೆಯರು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆವರಿಗೆ ಈಗ ನೀಡಲಾಗುತ್ತಿರುವ ಸಂಬಳ ಏನಕ್ಕೂ ಸಾಕಾಗುತ್ತಿಲ್ಲ. ಆದ್ದರಿಂದ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.