ಹೊನ್ನಾಳಿ : ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಮೂರು ತಿಂಗಳು ಕಳೆದಿವೆ. ಆದರೂ ಕನ್ನಡಿಗರಲ್ಲಿ ಅಪ್ಪು ಮೇಲಿನ ಅಭಿಮಾನ ಒಂಚೂರೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಹೊನ್ನಾಳಿ ತಾಲೂಕಿನ ಹರಗನಹಳ್ಳಿ ಗ್ರಾಮದಲ್ಲಿನ ಯುವಕರು ಅಪ್ಪು ಸ್ಮರಣಾರ್ಥವಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದ್ದರು.
ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪಂದ್ಯಾವಳಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಶಾಸಕರು, ಪುನೀತ್ ರಾಜ್‌ಕುಮಾರ್ ಎಲ್ಲರಿಗೂ ಆದರ್ಶವಾಗಿದ್ದ ವ್ಯಕ್ತಿ. ಹೀಗಾಗಿಯೇ ಅವರ ಹೆಸರಿನಲ್ಲಿ ಎಲ್ಲಾ ಕಡೆಯೂ ಅನೇಕ ಕ್ರೀಡಾಕೂಟಗಳನ್ನು ಆಯೋಜನೆ ಮಾಡಲಾಗುತ್ತಿದೆ. ಅದರಂತೆ ಇಲ್ಲಿಯೂ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ ಎಂದರು.