101.86 ಕೋಟಿ ವೆಚ್ಚದ 1123 ಕಾಮಗಾರಿಗಳಿಗೆ ಅನುಮೋದನೆ

ಹೈಲೆಟ್ಸ್ : 

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ
103.20 ಕೋಟಿ ಕ್ರಿಯಾ ಯೋಜನೆ ಸಲ್ಲಿಸಲು ಸೂಚನೆ
101.86 ಕೋಟಿ ವೆಚ್ಚದ 1123 ಕಾಮಗಾರಿಗಳಿಗೆ ಅನುಮೋದನೆ
ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾಹಿತಿ

ಶಿವಮೊಗ್ಗ : ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಗೆ ಸರ್ಕಾರವು ೨೦೨೨-೨೩ನೇ ಸಾಲಿಗೆ ಒಟ್ಟು ೧೦೩.೨೦ ಕೋಟಿ ಮೊತ್ತದ ಕ್ರೀಯಾ ಯೋಜನೆ ತಯಾರಿಸಲು ಅನುಮೋದನೆ ನೀಡಿದೆ ಎಂದು ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ತಿಳಿಸಿದ್ರು.

ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡಳಿಯಲ್ಲಿನ ೬೫ ವಿಧಾನ ಸಭಾ ಸದಸ್ಯರು ಹಾಗೂ ೨೧ ವಿಧಾನ ಪರಿಷತ್ ಸದಸ್ಯರಿಗೆ ತಲಾ ೧ ಕೋಟಿಗಳಂತೆ ಒಟ್ಟು ೮೬ ಕೋಟಿ ಹಾಗೂ ಶೇಕಡಾ ೨೦ರಷ್ಟು ಅಂದ್ರೆ ೧೭ ಕೋಟಿ ೨೦ ಲಕ್ಷ ಹೆಚ್ಚುವರಿಯಾಗಿ ಅನುಮೋದನೆ ಸಲ್ಲಿಸಲು ಸೂಚಿಸಿದ್ದಾರೆ.

ಇದರದಲ್ಲಿ ೧೦೧.೮೬ ಕೋಟಿ ವೆಚ್ಚದಲ್ಲಿ ೧೧೨೩ ಕಾಮಗಾರಿಗಳಿಗೆ ಈಗಾಗಲೇ ಸರ್ಕಾರ ಅನುಮೋದನೆ ನೀಡಿದೆ. ಹೊಸ ಕಾಮಗಾರಿಗಳನ್ನು ಆರ್ಥಿಕ ವರ್ಷದಲ್ಲಿ ಪೂರ್ಣಗೊಳಿಸಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದರು.