ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ 

ಶಿವಮೊಗ್ಗ : ರಾಜ್ಯ ಸರ್ಕಾರ ಆದಿ ಜಾಂಬವ ಸಮಾಜದ ಮಠದ ಅವೃದ್ಧಿಗೆ ಎರಡು ಕೋಟಿ ರೂಪಾಯಿ ನೆರವು ನೀಡಿದ್ದು, ಇನ್ನು ಒಂದು ಕೋಟಿ ರೂಪಾಯಿ ನೆರವು ನೀಡಿದರೆ ತಮ್ಮ ಸಮಾಜಕ್ಕೆ ಅನುಕೂಲವಾಗಲಿದೆ ಎಂದು ಕೋಡಿಹಳ್ಳಿ ಆದಿಜಾಂಭವ ಮಠದ ಗುರುಪ್ರಕಾಶ್ ಮುನಿಸ್ವಾಮೀಜಿ ತಿಳಿಸಿದರು.

ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಆದಿ ಜಾಂಬವ ಕ್ಷೇಮಾಭಿವೃದ್ಧಿ ಸಂಘದಿಂದ ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎನ್.ಪ್ರಕಾಶ್, ಆದಿ ಜಾಂಬವ ಸಮಾಜದಲ್ಲಿ ಸಾಕಷ್ಟು ಬಡಮಕ್ಕಳಿದ್ದಾರೆ. ಈ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಸಂಘದ ವತಿಯಿಂದ ನೀಡಲಾಗುತ್ತಿದೆ. ಹಾರನಹಳ್ಳಿ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಶಿಕ್ಷಣಕ್ಕಾಗಿ ಜಿಲ್ಲಾಡಳಿತಕ್ಕೆ ಎರಡು ಎಕರೆ ಜಾಗವನ್ನು ಸಂಘದ ವತಿಯಿಂದ ಕೇಳಲಾಗಿದೆ ಎಂದರು.

ಈ ವೇಳೆ ಮಾಧ್ಯಮಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ದೇವೇಂದ್ರಪ್ಪ, ಮೈಲಾರಪ್ಪ, ಚನ್ನೇಶಪ್ಪ, ಪ್ರತಾಪ್ ಕೆ.ಹಳದಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.