ಸಾಗರದ ಕಾಲೇಜು ವಿದ್ಯಾರ್ಥಿಗಳಿಗೆ ಧ್ವಜ ವಿತರಣೆ
ಸಾಗರ : ಹರ್ ಘರ್ ತಿರಂಗ ಅಂಗವಾಗಿ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ೭೦ ಸಾವಿರ ತ್ರಿವರ್ಣ ಧ್ವಜ ಹಾರಿಸಲು ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ, ಈ ಹಿನ್ನೆಲೆ ಸಾಗರ ಶಾಸಕ ಹರತಾಳು ಹಾಲಪ್ಪ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಜೊತೆ ಸೇರಿ ಸಾಗರದ ಕಾಲೇಜುಗಳಿಗೆ ಭೇಟಿ ನೀಡಿ ಧ್ವಜ ವಿತರಿಸಿದ್ರು. ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ವೇಳೆ ಸಾವಿರಾರು ವಿದ್ಯಾರ್ಥಿಗಳು ಹರ್ ಘರ್ ತಿರಂಗ, ವಂದೇ ಮಾತರಂ ಎಂದು ಘೋಷಣೆ ಮೊಳಗಿಸಿದ್ರು.
ತೀರ್ಥಹಳ್ಳಿಯಲ್ಲಿ ಹರ್ ಘರ್ ತಿರಂಗ ಅಭಿಯಾನ
ತೀರ್ಥಹಳ್ಳಿ : ಒಂದು ಕೈಯಲ್ಲಿ ಛತ್ರಿ, ಮತ್ತೊಂದು ಕೈಯಲ್ಲಿ ತ್ರಿ ವರ್ಣ ಧ್ವಜ. ಭಾರತ್ ಮಾತಾ ಕೀ ಜೈ ಅನ್ನೋ ಘೋಷಣೆ.. ಇದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕಂಡು ಬಂದ ದೃಶ್ಯ. ಹರ್ ಘರ್ ತಿರಂಗ ಅಭಿಯಾನ ಜಿಲ್ಲೆಯಾದ್ಯಂತ ಬಿರುಸು ಪಡೆದುಕೊಳ್ಳುತ್ತಿದ್ದು, ಧ್ವಜ ವಿತರಣೆ ಕಾರ್ಯ ನಡೀತಾ ಇದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಈ ತಿರಂಗ ಯಾತ್ರೆಯಲ್ಲಿ ಪಾಲ್ಗೊಂಡರು. ನೂರಾರು ವಿದ್ಯಾರ್ಥಿಗಳು ಕೈಯಲ್ಲಿ ಭಾವುಟು ಹಿಡಿದು ಮಳೆಯ ನಡುವೆಯೂ ಹೆಜ್ಜೆ ಹಾಕುವ ಮೂಲಕ ದೇಶಭಕ್ತಿಯ ಸಿಂಚನ ಮಾಡಿದರು. ಸ್ವಾತಂತ್ರ್ಯದ ೭೫ನೇ ವರ್ಷದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಧ್ವಜ ವಿತರಣೆ ಕಾರ್ಯ ಜಿಲ್ಲೆಯಾದ್ಯಂತ ನಡೆಯುತ್ತಿದೆ.
ಹೊಸಮನೆ ವಾರ್ಡ್‌ನಲ್ಲಿ ತ್ರಿವರ್ಣ ಧ್ವಜ ವಿತರಣೆ
ಶಿವಮೊಗ್ಗ : ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಡೆಯಲಿರುವ ಹರ್ ಘರ್ ತಿರಂಗ್ ಆಂದೋಲನಕ್ಕೆ ಹೊಸಮನೆ ವಾರ್ಡ್‌ನಲ್ಲಿ ಭಾರಿ ಸಿದ್ಧತೆ ನಡೆಯುತ್ತಿದೆ. ಇಲ್ಲಿನ ಪಾಲಿಕೆ ಸದಸ್ಯೆ ಹಾಗೂ ವಿಪಕ್ಷೆ ನಾಯಕಿ ರೇಖಾ ರಂಗನಾಥ್ ಪ್ರತಿ ಮನೆಗೂ ತ್ರಿವರ್ಣ ಧ್ವಜ ನೀಡುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿದ್ರು. ವಜ್ರೇಶ್ವರಿ ಗಣಪತಿ ದೇವಸ್ಥಾನ ದಿಂದ ಮನೆ ಮನೆಗೆ ತೆರಳಿ ತ್ರಿವರ್ಣ ಧ್ವಜ ವಿತರಿಸಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿ ಮನೆಯಲ್ಲಿಯೂ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಮಹಾನೀಯರನ್ನು ಸ್ಮರಿಸೋಣ ಎಂದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಕೆ ರಂಗನಾಥ್, ಪಾಲಿಕೆಯ ಅಧಿಕಾರಿ ಯಶ್ವಂತ, ಕುಪ್ಪರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ರು.