ಶಿವಮೊಗ್ಗ : ಜುಲೈ ೨೨ ಮತ್ತು ೨೩ ರಂದು ಶಿವಮೊಗ್ಗದ ಗುಡ್ಡೇಕಲ್ ಜಾತ್ರಾ ಮಹೋತ್ಸವ ನಡೆಯಲಿದೆ. ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಟ್ರಸ್ಟ್‌ನವರು ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿಯನ್ನು ನೀಡಿದರು.
೨ ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದ್ದು, ದೂರದ ಊರುಗಳಿಂದ ಹರಕೆ ತೀರಿಸೋದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕೊರೊನಾ ಕಾರಣದಿಂದ ೨ ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ.
ಇದೀಗ ಆ ಆತಂಕ ದೂರವಾಗಿದ್ದು, ಜಾತ್ರೆ ನಡೆಸೋದಕ್ಕೆ ದೇಗುಲದ ಟ್ರಸ್ಟ್‌ನವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಸುಬ್ರಹ್ಮಣ್ಯ ಸ್ವಾಮಿ ಟ್ರಸ್ಟ್‌ನ ವಿ. ರಾಜಶೇಖರ್ ಮತ್ತು ಸಂಪದ್ ಅವರು ಈ ಕುರಿತು ಮಾಹಿತಿ ನೀಡಿದರು.