ಶಿವಮೊಗ್ಗ : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಶಿವಮೊಗ್ಗ ಘಟಕದ ವತಿಯಿಂದ ಜೂನ್ ೧೧ರಂದು ವಿಪ್ರ ಮಹಿಳಾ ಸಮಾವೇಶ ಆಯೋಜಿಸಲಾಗಿದೆ. ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಕೆಬಿಎಂಸಿ ಮಹಿಳಾ ವಿಭಾಗದ ರಾಜ್ಯ ಸಂಚಾಲಕರಾದ ರೂಪಾಶಾಸ್ತ್ರೀ ಹಾಗೂ ಶುಭಮಂಗಳ ಆಗಮಿಸಿದ್ದಾರೆ.
ಮಾಜಿ ಶಾಸಕ ಎಂ.ಬಿ.ಪ್ರಕಾಶ್ ಗೌರವ ಉಪಸ್ಥಿತಿ ಇರಲಿದೆ. ಆದ್ದರಿಂದ ವಿಪ್ರ ಸಮಾಜದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಮಾಧ್ಯಮಗೊಷ್ಠಿ ನಡೆಸಿ ಮಾಹಿತಿ ನೀಡಿದರು.