ಶಿವಮೊಗ್ಗದಲ್ಲಿ ಆಕಾಶ್ ಬೈಜೂಸ್ ತರಗತಿ ಕೇಂದ್ರ

ಶಿವಮೊಗ್ಗ : ಶಿವಮೊಗ್ಗದ ಆಕಾಶ್ ಬೈಜೂಸ್‌ನ ಮೊದಲ ತರಗತಿ ಕೇಂದ್ರ ಆರಂಭವಾಗಿದೆ. ಬಾಲರಾಜ್ ರಸ್ತೆಯ ಶ್ರೀ ಶೈಲಾ ಜ್ಯೋತಿ ಕಾಂಪ್ಲೆಕ್ಸ್‌ನ ೨ ನೇ ಮಹಡಿಯಲ್ಲಿ ತರಗತಿ ಕೇಂದ್ರ ಪ್ರಾರಂಭವಾಗಿದೆ.

ಆಕಾಶ್ ಬೈಜೂಸ್‌ನ ಸೇಲ್ಸ್ ಗ್ರೋಥ್‌ನ ಪ್ರಾದೇಶಿಕ ಮುಖ್ಯಸ್ಥರಾದ ಪ್ರೇಮ್ ಚಂದ್ರರಾಯ್, ಪ್ರಾದೇಶಿಕ ಹಣಕಾಸು ಮುಖ್ಯಸ್ಥ ಪ್ರಮೋದ್ ಕುಮಾರ್ ಹಾಗೂ ಏರಿಯಾ ಬ್ಯೂಸಿನಸ್ ಹೆಡ್ ವಿಶ್ವನಾಥ್.ಪಿ.ಜಿ ತರಗತಿ ಕೇಂದ್ರವನ್ನು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಆಕಾಶ್ ಬೈಜೂಸ್‌ನ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಚೌದರಿ ಶಿವಮೊಗ್ಗದ ಪ್ರಥಮ ತರಗತಿ ಕೇಂದ್ರವು ಒಲಂಪಿಯಾಡ್‌ಗಳಿಗೆ, ವೈದ್ಯರಿಗೆ ಮತ್ತು ಐಐಟಿಯನ್ನರಾಗಲು ಸಿದ್ಧರಾಗ ಬಯಸುವ ವಿದ್ಯಾರ್ಥಿಗಳಿಗೆ ದೊಡ್ಡ ವರದಾನವಾಗಲಿದೆ ಎಂದರು. ಕೇಂದ್ರದಲ್ಲಿ 5 ಕೊಠಡಿಗಳಿದ್ದು, 650 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತದೆ.