ಸರ್ಕಾರ ಅಮಾನವೀಯವಾಗಿ ನಡೆದುಕೊಂಡಿದೆ : ಅಡುಗೆ ಸಿಬ್ಬಂದಿಗಳ ಆಕ್ರೋಶ 

ಶಿವಮೊಗ್ಗ : ವಯಸ್ಸಿನ ನೆಪಯೊಡ್ಡಿ ಅಡುಗೆ ಸಿಬ್ಬಂದಿಗಳನ್ನು ಕೆಲಸದಿಂದ ಬಿಡುಗಡೆಮಾಡಿರುವ ಸರ್ಕಾರದ ಕ್ರಮವನ್ನು ಅಕ್ಷರದಾಸೋಹ ನೌಕರರ ಸಂಘ ಖಂಡಿಸಿದೆ. ಬಿಸಿಯೂಟ ಯೋಜನೆ ಆರಂಭವಾದಗಿನಿಂದಲೂ ಕೆಲಸ ಮಾಡುತ್ತಿದ್ದ ಬಡ ಮಹಿಳೆಯರನ್ನು ಅಮಾನವೀಯವಾಗಿ ಕೆಲಸದಿಂದ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಸರ್ಕಾರ ಕೂಡಲೇ ಇವರಿಗೆ ನೀವೃತ್ತಿ ವೇತನವನ್ನು ನೀಡಬೇಕು. ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ 1000 ವೇತನ ಹೆಚ್ಚಿಸಲಾಗಿದೆ. ಈ ವೇತನವನ್ನು ಜನವರಿಯಿಂದಲೇ ಅನ್ವಯಿಸಿ ಜಾರಿ ಮಾಡಬೇಕು. ಬಿಸಿಯೂಟ ಯೋಜನೆಯನ್ನು ಕಾಯಂ ಮಾಡಬೇಕು ಹಾಗೂ ಮತ್ತಿತರ ಬೇಡಿಕೆಗಳನ್ನು ಈಡೇರಿಸಿವಂತೆ ಪ್ರತಿಭಟನಾಕಾರರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.