ಶಿವಮೊಗ್ಗ : ದೇಶದಲ್ಲಿ ಪ್ರತಿದಿನ ಹಲವು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮ ಹೆಣ್ಣುಮಕ್ಕಳು ತಮ್ಮ ರಕ್ಷಣೆಯನ್ನ ತಾವೇ ಮಾಡಿಕೊಳ್ಳಬೇಕು. ಅವರು ಯಾರಿಗೂ ಹೆದರುವುದಿಲ್ಲ ಎಂಬ ಥೀಮ್ ಇಟ್ಟುಕೊಂಡು ಅಗೆನೆಸ್ಟ್ ರೇಪ್ ಎಂಬ ಹಾಡು ತಯಾರಾಗಿದೆ.
ಈ ಕುರಿತಾಗಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವತಣಿಕೆ ಸ್ಟೂಡಿಯೋಸ್‌ನ ಸಾತ್ವಿಕ್ ಆಚಾರ್ಯ, ಈ ಹಾಡು ನಮ್ಮ ಅವತಣಿಕೆ ಸ್ಟುಡಿಯೋಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಎಲ್ಲರೂ ಇದನ್ನ ವೀಕ್ಷಿಸಿ ನಮ್ಮ ಪ್ರಯತ್ನಕ್ಕೆ ಬೆಂಬಲಿಸಬೇಕೆಂದು ಕೇಳಿಕೊಂಡರು.