ಮನೆ ಕೆಡವಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪ 

ಸಾಗರ : ಅರಣ್ಯ ಇಲಾಖೆ ಜಾಗದಲ್ಲಿ ಮನೆ ಕಟ್ಟಲಾಗಿದೆ ಎಂದು ಆರೋಪಿಸಿ ಅರಣ್ಯ ಇಲಾಖೆ ಇಲಾಖೆ ಸಿಬ್ಬಂದಿ ಮನೆಯನ್ನು ಕೆಡವಿ ಹಾಕಿದ್ದಾರೆ. ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೆಣ್ಣೆ ಗ್ರಾಮದ ಮಜಿರೆ ಗಿಳಿಗಾರು ಎಂಬಲ್ಲಿ ಈ ಘಟನೆ ಸಂಭವಿಸಿದೆ.

ನಾಗಮ್ಮ ಹಾಗೂ ಆಕೆಯ ಮಗ ಇಲ್ಲಿನ ಸರ್ವೆ ನಂಬರ್ ೪೫ರಲ್ಲಿ ಹಲವು ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದರು. ಗುಡಿಸಲು ಶಿಥಿಲವಾಗಿದ್ದರಿಂದ ತಾತ್ಕಾಲಿಕವಾಗಿ ಸಿಮೆಂಟ್ ಹಲಗೆ, ಸಿಮೆಂಟ್ ಕಂಬ, ಬಾಗಿಲು, ಸಿಮೆಂಟ್ ಶೀಟ್ ಬಳಸಿ ಮನೆ ಕಟ್ಟಿಕೊಂಡಿದ್ದರು. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ಬಂದು ಮನೆಯನ್ನು ಕೆಡವಿ ಹಾಕಿದ್ದಾರೆ. ನಮ್ಮ ಮೇಲೆಯು ಹಲ್ಲೆ ನಡಿಸಿದ್ದಾರೆ ಎಂದು ನಾಗಮ್ಮ ಹಾಗೂ ಸತೀಶ್ ಅರಣ್ಯ ಇಲಾಖೆ ಸಿಬ್ಬಂದಿವಿರುದ್ಧ ಆರೋಪ ಮಾಡಿದ್ದಾರೆ.