ಸಾಗರ : ಜಾತ್ರೆಗಳಲ್ಲಿ ಮಳಿಗೆ ಅಂದ್ರೆ ನಿಮಗೆ ಏನ್ ನೆನಪಾಗುತ್ತದೆ. ಆಟದ ಮಳಿಗೆಗಳು, ತಿಂಡಿ, ತಿನಿಸು ಅಂಗಡಿಗಳು. ಅಲಂಕಾರಿಕ ವಸ್ತುಗಳ ಮಳಿಗೆಗಳು... ಹೀಗೆ ಈ ರೀತಿಯ ಮಳಿಗೆಗಳೇ ಎಲ್ಲರ ಕಣ್ಣುಮುಂದೆ ಬರುತ್ತೆ. ಆದರೆ ಸಾಗರದ ಶ್ರೀ ಮಹಾಗಣಪತಿ ಜಾತ್ರೆಯಲ್ಲೊಂದು ಮಳಿಗೆಯಿದೆ. ಈ ಮಳಿಗೆಗೆ ಹೋದ್ರೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಪಡೆಯಬಹುದು.
ಹೌದು, ಇಲಾಯಿಂದ ಯಾವೆಲ್ಲಾ ಯೋಜನೆಗಳಿವೆ. ಯಾರ್‍ಯಾರು ಆ ಯೋಜನೆಗಳನ್ನು ಪಡೆಯಬಹುದು. ಹೀಗೆ ಎಲ್ಲಾ ರೀತಿಯ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತಿದೆ. ಹಾಗೇನೆ, ಸಿಗಂದೂರಿನಲ್ಲಿ ಸುಮಾರು 423 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಯ ಮಾಡೆಲ್ ಅನ್ನು ಪ್ರದರ್ಶನದಲ್ಲಿ ಇಡಲಾಗಿದೆ. ವಿಶೇಷ ಏನ್ ಅಂದ್ರೆ ಕಸದಿಂದ ರಸ ಎಂಬ ಪರಿಕಲ್ಪನೆಯಂತೆ ಹಳೆಯ ಬುಟ್ಟಿಗಳು, ನಿರುಪಯುಕ್ತ ಬಟ್ಟೆಗಳು, ವೇಸ್ಟ್ ಪೈಪ್‌ಗಳು, ಒಣ ಗಿಡದ ಕಡ್ಡಿಗಳನ್ನು ಬಳಸಿಕೊಂಡು ಈ ಮಾದರಿ ತಯಾರಿಸಲಾಗಿದೆ.