ಹೈಲೆಟ್ಸ್:
ಹಣ್ಣು ಮತ್ತು ತರಕಾರಿ ಸಾಗಣೆಗೆ ಹೊಸ ವಾಹನ
ಹಾಪ್‌ಕಾಮ್ಸ್‌ಗೆ ವಾಹನ ಹಸ್ತಾಂತರ ಕಾರ್ಯಕ್ರಮ
ಶಿವಮೊಗ್ಗ:
ರಾಜ್ಯ ಸರಕಾರದ ತೋಟಗಾರಿಕೆ ನಿಗಮ ಮತ್ತು ಮಂಡಳಿಗೆ ಸಹಾಯಧನ ಯೋಜನೆಯಡಿ ನೀಡಿರುವ ಅನುದಾನದಿಂದ ನೀಡಿದ ಹಣ್ಣು ಮತ್ತು ತರಕಾರಿ ಸಾಗಣೆ ವಾಹನವನ್ನು ಶಿವಮೊಗ್ಗ ಹಾಪ್‌ಕಾಮ್ಸ್‌ಗೆ ಹಸ್ತಾಂತರ ಮಾಡುವ ಕಾರ್ಯಕ್ರಮ ಶಿವಮೊಗ್ಗದಲ್ಲಿ ನಡೆಯಿತು. ರೈತರ ಹೊಲಗಳಿಗೆ ತೆರಳಿ ತರಕಾರಿ ಖರೀದಿ ಮಾಡಿ ಮಾರಾಟ ಮಾಡಲು ಇದರಿಂದ ಅನುಕೂಲವಾಗಲಿದೆ. ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮತ್ತು ಮಾರಾಟ ಮಹಾಮಂಡಳಿಯವರು ಈ ವಾಹನಗಳನ್ನು ಹಾಪ್‌ಕಾಮ್ಸ್‌ಗೆ ಹಸ್ತಾಂತರ ಮಾಡಿದರು.