ಜೆಎನ್‌ಎನ್‌ಸಿಇ ಕಾಲೇಜಿನ ವಿದ್ಯಾರ್ಥಿಗಳಿಂದ ಕಾರಿಗೆ ಹೊಸ ಟಚ್

ಶಿವಮೊಗ್ಗ : ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಬಚಾವಾಗಲು ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇವೆ. ಶಿವಮೊಗ್ಗದ ವಿದ್ಯಾರ್ಥಿಗಳು ಹಳೆಯ ಇಂಧನ ಚಾಲಿತ ವಾಹನವನ್ನು ಎಲೆಕ್ಟ್ರಿಕ್ ವಾಹನವಾಗಿ ಬದಲಾಯಿಸದ್ದಾರೆ.

ಹೌದು ನಗರದ ಜೆಎನ್‌ಎನ್‌ಸಿಇ ಕಾಲೇಜಿನ ಮೆಕ್ಯಾನಿಕಲ್ ವಿದ್ಯಾರ್ಥಿಗಳು ಹಳೆಯ ಇಂಧನ ಚಾಲಿತ ವಾಹನವನ್ನೆ ಬದಲಾಯಿಸಿ ಎಲೆಕ್ಟ್ರಿಕ್ ಕಾರಿನ ರೂಪಕೊಟ್ಟಿದ್ದಾರೆ.

ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಎಸ್.ಜೆ.ಅಮಿತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಾತ್ವಿಕ್ ಜಿ, ಅಭಿಷೇಕ್ ಕೆವಿನ್ ಡಿಟಿ, ಕಾರ್ತಿಕ್ ಶೆಟ್ಟಿ, ಮತ್ತು ಮನೋಹರ್ ಟೀಂ ವಿದ್ಯುತ್ ಚಾಲಿತ ಕಾರನ್ನ ಅಭಿವೃದ್ಧಿ ಪಡಿಸಿದ್ದಾರೆ.

ಸುಮಾರು ೫ ಗಂಟೆ ಚಾರ್ಜ್ ಮಾಡಿದರೆ, ಗರಿಷ್ಟ ೮೦-೯೦ ಕಿಲೋಮೀಟರ್ ನಷ್ಟು ಈ ಕಾರು ಮೈಲೇಜು ನೀಡುತ್ತಿದೆ. ಇಷ್ಟು ಹೊತ್ತು ಚಾರ್ಜ್ ಮಾಡಲು ಕೇವಲ ನಾಲ್ಕೈದು ಯುನಿಟ್ ವಿದ್ಯುತ್ ಸಾಕು. ಇದಕ್ಕೆ ೨೦ರಿಂದ ೩೦ ರೂಪಾಯಿ ಖರ್ಚಾಗಲಿದೆ.