ಗುಡ್ಡೇಕಲ್ ಜಾತ್ರೆಗೆ ಅದ್ದೂರಿ ಆರಂಭ

ಶಿವಮೊಗ್ಗ : ಎರಡು ವರ್ಷದ ಬಳಿಕ ಗುಡ್ಡೇಕಲ್ ಅಡಿಕೃತ್ತಿಗೆ ಹರೋ ಹರ ಜಾತ್ರೆ ನಡೆಯುತ್ತಿದೆ. ಶ್ರೀ ಬಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯುವ ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ಶಿವಮೊಗ್ಗ, ಭದ್ರಾವತಿ ಸೇರಿದಂತೆ ಸುತ್ತಮುತ್ತ ಜಿಲ್ಲೆಗಳು, ಹೊರ ರಾಜ್ಯದಿಂದ ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಹರೋ ಹರೋ ಭಜನೆ ಮಾಡುತ್ತಾ ದೇಗುಲಕ್ಕೆ ಬಂದು ಹರಕೆ ತೀರಿಸುತ್ತಿದ್ದಾರೆ. ಅಂದ್ಹಾಗೆ ಆಷಾಢ  ಮಾಸದಲ್ಲಿ ಕೃತ್ತಿಕೆ ದಿನದಂದು ಈ ಉತ್ಸವ ಆಚರಿಸಲಾಗುತ್ತದೆ. ಮೊದಲನೆಯ ದಿನ ಭರಣಿ ಕಾವಡಿ ಅಂತಲೂ, ಎರಡನೆಯ ದಿನವನ್ನು ಆಡಿ ಕೃತ್ತಿಕೆ ಅಂತಲೂ ಆಚರಿಸಲಾಗುತ್ತದೆ. ತಮಿಳುನಾಡಿನಿಂದ ಇಲ್ಲಿಗೆ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬರು ೮೦ ವರ್ಷಗಳ ಹಿಂದೆ ಈ ಸ್ಥಳದಲ್ಲಿ ಸಣ್ಣದಾದ ವಿಗ್ರಹ ಸ್ಥಾಪಿಸಿ ಪೂಜೆ ಮಾಡಲು ಆರಂಭಿಸಿದ್ದರು ಎಂಬ ಪ್ರತೀತಿ ಇದೆ. 


ಗುಡ್ಡೇಕಲ್ ಜಾತ್ರೆಗೆ ಆಗಮಿಸ್ತಾಯಿರೋ ಭಕ್ತರ ದಂಡು

ಗುಡ್ಡೇಕಲ್‌ನಲ್ಲಿ ನಡೆಯುತ್ತಿರುವ ಆಡಿಕೃತ್ತಿಗೆ ಹರೋ ಹರ ಜಾತ್ರೆಯಲ್ಲಿ ಜನರು ತಮ್ಮ ಹರಕೆಯನ್ನು ತೀರಿಸಲು ಆಗಮಿಸ್ತಾಯಿದ್ದಾರೆ.  ಶ್ರೀ ಬಾಲ ಸುಬ್ರಹ್ಮಣ್ಯ ಸ್ವಾಮಿಯ ಬಳಿ ಹರಕೆ ಮಾಡಿಕೊಂಡರೆ ಅದು ಖಂಡಿತವಾಗಿಯೂ ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಈ ಹಿನ್ನೆಲೆ ಸಾವಿರಾರು ಭಕ್ತರು ಇಲ್ಲಿ ಹರಕೆ ಹೊತ್ತಿರುತ್ತಾರೆ. ಅಂಥವರು ಜಾತ್ರೆಯ ಸಮಯದಲ್ಲಿ ಬಂದು ತಮ್ಮ ಹರಕೆಯನ್ನು ತೀರಿಸುತ್ತಾರೆ. ನಾನಾ ಕಡೆಗಳಿಂದ ಮಡಿ ವಸ್ತ್ರ ಧರಿಸಿ, ಕಾವಡಿ ಹೊತ್ತು, ಕಾಲ್ನಡಿಗೆ ಮೂಲಕವೇ ದೇವಸ್ಥಾನಕ್ಕೆ ತೆರಳುತ್ತಿರುವ ದೃಶ್ಯಗಳು ಕಂಡುಬರುತ್ತಿದೆ.