ಶಿವಮೊಗ್ಗ : 4 ಅಡಿ ನಾಗರ ಹಾವೊಂದು ನಾಯಿ ಮರಿ ನುಂಗಿರುವ ಘಟನೆ ವಿದ್ಯಾನಗರದಲ್ಲಿ ನಡೆದಿದೆ. ಚಂದ್ರಪ್ಪ ಎಂಬುವರು ಬೆಳಿಗ್ಗೆ ಮನೆ ಸ್ವಚ್ಛ ಮಾಡುವ ಸಂದರ್ಭದಲ್ಲಿ ನಾಗರಹಾವೊಂದು ಗೇಟಿನಿಂದ ಮನೆಯ ಒಳಗೆ ಬಂದಿದ್ದನ್ನ ಗಮನಿಸಿದ್ದಾರೆ. ತಕ್ಷಣವೇ ಸ್ನೇಕ್ ಕಿರಣ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಕಿರಣ್ ಹಾವನ್ನ ಹಿಡಿದು ಚೀಲವೊಂದಕ್ಕೆ ತುಂಬಿಸಿಕೊಂಡಿದ್ದಾರೆ. ಆ ವೇಳೆ ಹಾವಿನ ಹೊಟ್ಟೆ ಭಾರವಾಗಿತ್ತು. ಚೀಲದಲ್ಲಿ ತುಂಬಿಸಿಕೊಂಡ ವೇಳೆ ಹಾವು ಒದ್ದಾಡಿದೆ. ವಾಂತಿ ಮಾಡಿಕೊಳ್ಳಬಹುದು ಎಂದು ನಿರೀಕ್ಷಿಸಿದ ಸ್ನೇಕ್ ಕಿರಣ್ ಚೀಲದಿಂದ ಹಾವನ್ನು ಹೊರತೆಗೆದಿದ್ದಾರೆ. ಚೀಲದಿಂದ ಹೊರಗೆ ಬರುತ್ತಿದ್ದಂತೆ ನಾಗರಹಾವು ನಾಯಿ ಮರಿಯೊಂದನ್ನ ಬಾಯಿಂದ ಹೊರಹಾಕಿದೆ. ನಂತರ ಹಾವನ್ನ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.