ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು: ಸುನಿತಾ ಅಣ್ಣಪ್ಪ

ಶಿವಮೊಗ್ಗ : ನಗರದ ವಿವಿಧೆಡೆ ಕನ್ಸರ್‌ವೆನ್ಸಿಗಳು ಇವೆ. ಆದರೆ, ಅವುಗಳ ನಿರ್ವಹಣೆ ಮಾತ್ರ ಸರಿಯಾಗಿ ಇಲ್ಲ. ನೂರಾರು ಕನ್ಸರ್‌ವೆನ್ಸಿಗಳು ಇದ್ರೂ ಪಾಲಿಕೆಯವರು ಗಮನಹರಿಸ್ತಾ ಇಲ್ಲ. ಕೆಲವುಗಳು ಅತಿಕ್ರಮಣವಾಗಿರೋ ಆರೋಪವೂ ಇದೆ.

ಈ ನಡುವೆ  ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಮತ್ತು ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಶಿವಮೊಗ್ಗ ನಗರದ ಕನ್ಸರ್‌ವೆನ್ಸಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ಕುರಿತಾಗಿ ಮಾತನಾಡಿದ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಇನ್ನೊಂದು ವಾರದಲ್ಲಿ ಟೌನ್ ವೆನ್ಡಿಂಗ್ ಕಮಿಟಿ ಹಾಗೂ ಟ್ರಾಫಿಕ್ ಅವರ ಜೊತೆ ಚರ್ಚೆ ನಡೆಸಿ, ಇವುಗಳನ್ನ ಅಂತಿಮಗೊಳಿಸಲಾಗುವುದು. ಬೀದಿ ಬದಿ ವ್ಯಾಪಾರಸ್ಥರಿಗೆ ನೆಲೆ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.