ನ್ಯಾಯಕ್ಕಾಗಿ 150 ಅಡಿ ಎತ್ತರದ ಟವರ್ ಏರಿದ ವ್ಯಕ್ತಿ 

ಹೊಸನಗರ : ತನ್ನ ಮನೆ ನೆಲಸಮವಾಗಿದ್ದಕ್ಕೆ ಮನನೊಂದ ವ್ಯಕ್ತಿಯೊಬ್ಬ ನ್ಯಾಯಕ್ಕಾಗಿ ಮೊಬೈಲ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೊಸನಗರ ತಾಲೂಕಿನ ಕೊಡೂರಿನಲ್ಲಿ ನಡೆದಿದೆ.

ಇಲ್ಲಿನ ಶಾಂತಪುರ ನಿವಾಸಿ  ಕೃಷ್ಣಮೂರ್ತಿ ಎಂಬಾತನು ಸರ್ವೆ ನಂಬರ್ 14ರಲ್ಲಿ ಸುಮಾರ್ 1994-95 ರಿಂದ ಒಂದು ಗುಡಿಸಿಲಿನಲ್ಲಿ ವಾಸವಾಗಿದ್ದ. ಆದ್ರೆ ಡಿ.ಕೆ.ಮಂಜುನಾಥ್ ಎಂಬಾತ, ರಾತ್ರೋರಾತ್ರಿ ಕೃಷ್ಣಮೂರ್ತಿಯನ್ನ ಮನೆಯಿಂದ ಹೊರಹಾಕಿದ್ದಾನೆ. ಇಷ್ಟೆ ಅಲ್ಲದೆ, ಮನೆಯನ್ನ ಕೆಡವಿ ನೆಲಸಮ ಮಾಡಿ, ಜಾಗ ಕಬಳಿಸಿದ್ದಲ್ಲದೆ, ತೊಡೆ ತಟ್ಟಿ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದ ಕೃಷ್ಣಮೂರ್ತಿ, ಕೋಡೂರಿನಲ್ಲಿರುವ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆಗ ಅಲ್ಲಿನ ಗ್ರಾಮಸ್ಥರು ,ಪೊಲೀಸ್ ಅಧಿಕಾರಿಗಳು ಹಾಗೂ ಫೈರ್ ಎಂಜಿನ್ ಅಧಿಕಾರಿಗಳು ನ್ಯಾಯ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಆನಂತರವೇ ಕೃಷ್ಣಮೂರ್ತಿ ಟವರ್‌ನಿಂದ ಕೆಳಗಿಳಿದು ಬಂದಿದ್ದಾನೆ. ಸ್ಥಳದಲ್ಲಿ ತಹಶೀಲ್ದಾರ್ ರಾಜೀವ್, ಸರ್ಕಲ್ ಇನ್ಸ್‌ಪೆಕ್ಟರ್ ಮಧುಸೂದನ್, ಸಬ್ ಇನ್ಸ್‌ಪೆಕ್ಟರ್ ಶಿವಾನಂದ್, ಕೋಡೂರಿನ ಗ್ರಾಮಪಂಚಾಯತ್ ಅಧ್ಯಕ್ಷೆ  ಸುನಂದ, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸದಸ್ಯರು ಕಲಗೋಡು ಉಮೇಶ್, ಸವಿತ ಕೆ ಎಸ್ ಹಾಗು ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.