ಚಂದ್ರಗುತ್ತಿಯಲ್ಲಿ ೯ ದಿನ ದಸರಾ ಮಹೋತ್ಸವ

ಹೈಲೆಟ್ಸ್: 

ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನ

೯ ದಿನಗಳ ಕಾಲ ನಡೆಯಲಿರುವ ದಸರಾ ಮಹೋತ್ಸವ

ಸೆಪ್ಟಂಬರ್ ೨೬ಕ್ಕೆ ದಸರಾಗೆ ಚಾಲನೆ

ಸರ್ಕಾರದಿಂದ ೧೫ ಲಕ್ಷ ಅನುದಾನ ಬಿಡುಗಡೆ

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್ ಮಾಹಿತಿ

ಸೊರಬ:  ಚಂದ್ರಗುತ್ತಿಯ ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಸೆಪ್ಟಂಬರ್ ೨೬ರಿಂದ ಅಕ್ಟೋಬರ್ ೪ರವರೆಗೆ ದಸರಾ ಉತ್ಸವ ಆಚರಿಸಲಾಗುವುದು. ಸರ್ಕಾರದಿಂದ ರಚನೆಯಾಗಿರುವ ವ್ಯವಸ್ಥಾಪನ ಸಮಿತಿ ಹಾಗೂ ಸರ್ಕಾರದ ವತಿಯಿಂದ ದಸರಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಗುವುದು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್ ಹೇಳಿದರು.

ಈ ಕುರಿತು ಮಾಹಿತಿ ನೀಡಿದ ಅವರು, ಚಿತ್ರದುರ್ಗದ ವಡ್ಡ ಬೋವಿ ಸಮಾಜದ ಶ್ರೀ ಹಿಮ್ಮಡಿ ಸಿದ್ದೇಶ್ವರ ಸ್ವಾಮೀಜಿ ಹಾಗೂ ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ ದಸರಾಗೆ ಚಾಲನೆ ನೀಡಲಿದ್ದಾರೆ. ೯ ದಿನಗಳ ಶಾಸಕ ಕುಮಾರ್ ಬಂಗಾರಪ್ಪ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ. ದಸರಾ ಉತ್ಸವಕ್ಕೆ ಸರ್ಕಾರದಿಂದ ೧೫ ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಹಾಗೇನೆ, ದೇವಸ್ಥಾನ ಮತ್ತು ಸರ್ಕಾರದ ವತಿಯಿಂದ ಯಾವುದೇ ಸಂಘ ಸಂಸ್ಥೆಗಳನ್ನು ನೇಮಕ ಮಾಡಿರುವುದಿಲ್ಲ ಯಾರಿಗೂ ಕೂಡ ದೇಣಿಗೆ ಕಳಿಸಿರುವುದಿಲ್ಲ ಆ ರೀತಿ ಏನಾದರೂ ಕಂಡುಬoದಲ್ಲಿ ತಾಲೂಕು ದಂಡಾಧಿಕಾರಿಗಳ ಗಮನಕ್ಕೆ ತಿಳಿಸಬೇಕು ಎಂದರು.