ಹೈಲೆಟ್ಸ್ :
ಮಳೆ ಅಬ್ಬರಕ್ಕೆ ಕುಸಿದ ಮನೆ ಗೋಡೆ
ಗೋಡೆ ಬಿದ್ದು ಮೃತಪಟ್ಟ ೬೯ ವರ್ಷದ ಗೌರಮ್ಮ
ಮಲವಗೊಪ್ಪದ ಇಂದಿರಾನಗರದಲ್ಲಿ ನಡೆದ ದುರ್ಘಟನೆ
ಸ್ಥಳಕ್ಕೆ ಅಧಿಕಾರಿ, ಜನಪ್ರತಿನಿಧಿಗಳ ಭೇಟಿ
ಮಲವಗೊಪ್ಪ : ನಗರದಲ್ಲಿ ಅಬ್ಬರಿಸುತ್ತಿರುವ ಭಾರಿ ಮಳೆಗೆ ಮನೆ ಗೋಡೆ ಕುಸಿದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಮಲವಗೊಪ್ಪದ ಇಂದಿರಾನಗರದಲ್ಲಿ ನಡೆದಿದೆ. ಮಳೆಗೆ ಮನೆ ತೇವಗೊಂಡು ಗೋಡೆ ಕುಸಿದು ಬಿದ್ದಿದೆ.
ತಡರಾತ್ರಿ ಮಲಗಿದ್ದಾಗ ಈ ಘಟನೆ ನಡೆದಿದ್ದು ೬೯ ವರ್ಷದ ವೃದ್ಧೆ ಗೌರಮ್ಮ ಮೇಲೆ ಗೋಡೆ ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಡಾ.ನಾಗರಾಜ್ ಎನ್.ಜೆ, ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಪಾಲಿಕೆ ಸದಸ್ಯರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ರು.