ಭಾರತದಿಂದ ಒಂದು ಮಿಲಿಯನ್ ಡಾಲರ್ ನೆರವು 

ದೆಹಲಿ : ಪ್ರಾದೇಶಿಕ ಭದ್ರತೆ ಈಗ ಅತ್ಯಂತ ಮುಖ್ಯವಾಗಿದ್ದು, ಯೂರೋಪ್ ಖಂಡದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅಂತಾರಾಷ್ಟ್ರೀಯ ಶಾಂತಿಗೆ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಈ ಸಂದರ್ಭದಲ್ಲಿ ಪ್ರಾದೇಶಿಕ ಸಹಕಾರ ಅಭಿವೃದ್ಧಿ ಹೆಚ್ಚಿನ ಆದ್ಯತೆಯಾಗಿದೆ. ಹೀಗಾಗಿ ನಾವು ಬಿಮ್‌ಸ್ಟೆಕ್ ನಿಯಮಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ನಡೆಯುತ್ತಿರುವ 5ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತವು ಬಿಮ್‌ಸ್ಟೆಕ್ ಸೆಕ್ರೆಟರಿಯೇಟ್‌ಗೆ ಅದರ ಕಾರ್ಯಾಚರಣೆ ಅನ್ನು ಹೆಚ್ಚಿಸಲು ಒಂದು ಮಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ನೀಡುತ್ತದೆ. ಸೆಕ್ರೆಟರಿಯೇಟ್‌ನ ಸಾಮರ್ಥ್ಯವನ್ನು ಬಲಪಡಿಸುವುದು ಮುಖ್ಯವಾಗಿದೆ. ಇದಕ್ಕಾಗಿ ಬಿಮ್‌ಸ್ಟೆಕ್‌ನ ಪ್ರಧಾನ ಕಾರ್ಯದರ್ಶಿಗೆ ಮಾರ್ಗಸೂಚಿ ರಚಿಸಲು ಮನವಿ ಮಾಡುತ್ತೇವೆ. ನಳಂದ ಇಂಟರ್‌ನ್ಯಾಶನಲ್ ಯೂನಿವರ್ಸಿಟಿ ನೀಡುವ ಬಿಮ್‌ಸ್ಟೆಕ್ ಸ್ಕಾಲರ್‌ಶಿಪ್ ಕಾರ್ಯಕ್ರಮ ವಿಸ್ತರಿಸಲು ನಾವು ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ