ದೆಹಲಿ : ದೇಶದ ಭದ್ರತೆ ಮತ್ತು ಗೌಪ್ಯತೆಗೆ ಅಪಾಯಕಾರಿಯಾದ ಚೀನಾದ ಆಪ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ಮತ್ತೆ ೫೪ ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಚೀನಾ ನಿರ್ಮಿತ ಆಪ್‌ಗಳನ್ನು ಈ ಹಿಂದೆ ನಿಷೇಧಿಸಿ ಬಳಕೆಗೆ ನಿಬಂಧ ವಿಧಿಸಿದ್ದ ಅವು ಹೊಸ ಹೆಸರು, ಬ್ರಾಂಡ್ ಮೂಲಕ ದೇಶಕ್ಕೆ ಕಾಲಿಟ್ಟಿದ್ದವು. ಈ ಅಪ್ಲಿಕೇಶನ್‌ಗಳು ದೇಶದ ಆಂತರಿಕ ವಿಚಾರ, ಭದ್ರತೆಗೆ ತೊಡಕಾದ ಕಾರಣ ಅಂತಹ ಆಪ್‌ಗಳನ್ನು ಹುಡುಕಿ ಬಳಕೆಗೆ ನಿಷೇಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವೀಟ್ ಸೆಲ್ಫಿ ಹೆಚ್‌ಡಿ, ಬ್ಯೂಟಿ ಕ್ಯಾಮೆರಾ-ಸೆಲ್ಫಿ ಕ್ಯಾಮೆರಾ, ಈಕ್ವಲೈಸರ್ ಅಂಡ್ ಬಾಸ್ ಬೂಸ್ಟರ್, ಐಸೋಲ್ಯಾಂಡ್ -೨ ಸೇರಿದಂತೆ ಒಟ್ಟು ೫೪ ಚೀನಾದ ಆಪ್‌ಗಳಿಗೆ ನಿಷೇಧ ಹೇರಲಾಗಿದೆ.