ನಗರದಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿ
ಶಿವಮೊಗ್ಗ : ನಗರದಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿಗಳ ವಿರುದ್ಧ ಆಮ್ ಆದ್ಮಿ ಪಾರ್ಟಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದೆ. ಸೋಮಿನಕೊಪ್ಪ ೧ನೇ ವಾರ್ಡಿನ ಆಟೋ ಕಾಲೋನಿಯಲ್ಲಿ ರಸ್ತೆಯ ಕಳಪೆ ಕಾಮಗಾರಿ ನಡೆಯುತ್ತಿದ್ದು ಇದರ ಪರಿಶೀಲನೆ ಮಾಡಬೇಕು ಹಾಗೂ ಕೇವಲ ಒಂದೆರಡು ತಿಂಗಳ ಹಿಂದೆ ನಡೆದಿದ್ದ ಡಿವಿಎಸ್‌ನಿಂದ ಕಾನ್ವೆಂಟ್ ವರೆಗಿನ ರಸ್ತೆಯು ಸಂಪೂರ್ಣ ಹಾಳಾಗಿ ಹೋಗಿದೆ. ಆದ್ದರಿಂದ ಇದಕ್ಕೆ ಕಾರಣವಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ರು.
ವಿಧವೆಯರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ
ಶಿವಮೊಗ್ಗ : ವಿಧವೆಯರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಚಾಣುಕ್ಯ ಸೇನೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದೆ. ರಾಷ್ಟ್ರೀಯ ಕುಟುಂಬ ಪರಿಹಾರ ಯೋಜನೆಯಡಿ ವಿಧವೆಯರಿಗೆ ಮಂಜೂರಾಗಿರುವ ೨೫ ಸಾವಿರವನ್ನು ಕೂಡಲೇ ನೀಡಬೇಕು. ಹಾಗೇನೆ ಈ ಅನುದಾನವನ್ನು ೫೦ ಸಾವಿರಕ್ಕೆ ಏರಿಸಬೇಕು. ಹಾಗೂ ಆಂಧ್ರ, ತೆಲಂಗಾಣ, ತಮಿಳುನಾಡು ಸರ್ಕಾರ ವಿಧವೆಯರಿಗೆ ಮಾಸಾನವನ್ನು ನೀಡುವಂತೆ ನಮ್ಮ ಸರ್ಕಾರವು ಈಗ ನೀಡ್ತಾಯಿರುವ ಮಸಾಶನವನ್ನು ೮೦೦ರಿಂದ ೩ ಸಾವಿರಕ್ಕೆ ಏರಿಸಬೇಕು. ಹೀಗೆ ಇನ್ನು ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಿದ್ರು.