ಇಂದಿನ ಪ್ರಮುಖ ಮಾಧ್ಯಮಗೋಷ್ಠಿಗಳು

ಶಿವಮೊಗ್ಗದಲ್ಲಿ ೨೧ನೇ ರಾಜ್ಯಮಟ್ಟದ ಊಷೂ ಕ್ರೀಡಾಕೂಟ

ಶಿವಮೊಗ್ಗ : ಆಗಸ್ಟ್ ೬ರಿಂದ ೯ರವೆಗೆ ಶಿವಮೊಗದಲ್ಲಿ ೨೧ನೇ ರಾಜ್ಯಮಟ್ಟದ ಊಷೂ ಕ್ರೀಡಾಕೂಟ ನಡೆಯಲಿದೆ. ಶಿವಮೊಗ್ಗ ಜಿಲ್ಲಾ ಊಷೂ ಸಂಸ್ಥೆಯು ಈ ಕೀಡಾಕೂಟವನ್ನು ಆಯೋಜಸಿದೆ. ರಾಜ್ಯಾದ್ಯಂತ ಸುಮಾರು ೮೦೦ ಕ್ರೀಡಾಪಟುಗಳು, ತರಬೇತಿದಾರರು,  ಭಾಗವಹಿಸಲಿದ್ದಾರೆ. ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಅಂದ್ಹಾಗೆ ಈ ಊಷೂ ಕ್ರೀಡೆಯು ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಎ ಗ್ರೇಡ್ ಪಡೆದುಕೊಂಡಿದೆ ಎಂದು ಕ್ರೀಡಾಕೂಟ ಆಯೋಜಕರು ಮಾಹಿತಿ ನೀಡಿದ್ರು.

ಬೇಡ ಜಂಗಮರೇ ಬೇರೆ ಲಿಂಗಾಯತ ಜಂಗಮರೇ ಬೇರೆ

ಶಿವಮೊಗ್ಗ :ಬೇಡ ಜಂಗಮರೇ ಬೇರೆ, ಲಿಂಗಾಯತ ಜಂಗಮರೇ ಬೇರೆ. ಬೇಡ ಜಂಗಮರ ಹೆಸರಿನಲ್ಲಿ ಲಿಂಗಾಯತರು ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುವುದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ಈ ವಿಚಾರವಾಗಿ ನಾವು ರಾಜ್ಯದಂತ ಹೋರಾಟ ನಡೆಸಲು ಕೂಡ ಸಿದ್ಧರಿದ್ದೇವೆ ಎಂದು ಡಿಎಸ್‌ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಸರ್ಕಾರಕ್ಕೆ ಎಚ್ಚರಿಸಿದ್ರು. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ ಬೇಡ ಜಂಗಮರ ಹೆಸರಿನಲ್ಲಿ ಸಂಘ ಕಟ್ಟಿಕೊಟ್ಟಿಕೊಂಡಿದ್ದಾರೆ. ಆದ್ರೆ ಅವರ ಹಾಗೂ ರೇಣುಕಾಚಾರ್ಯ ಅವರ ಶಾಲಾ ದಾಖಲೆಗಳಲ್ಲಿ ಹಿಂದೂ ಲಿಂಗಾಯತ ಎಂದು ದಾಖಲೆಯಿದೆ. ಈ ಕುರಿತು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ರು. 

ಆಗಸ್ಟ್ ೧೬ರಿಂದ ಉದ್ಯೋಗ ಮೇಳ ಚಳುವಳಿ 

ಶಿವಮೊಗ್ಗ :ರೋಜ್‌ಗಾರ್ ಆಂದೋಲನ ಸಮಿತಿಯಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ನಿರುದ್ಯೋಗದ ವಿರುದ್ಧ ಆಗಸ್ಟ್ ೧೬ರಿಂದ ಉದ್ಯೋಗ ಮೇಳ ಚಳುವಳಿ ಹಮ್ಮಿಕೊಳ್ಳಾಗಿದೆ ಎಂದು ದೇಶ್ ಕೀ ಬಾತ್ ಫೌಂಡೇಷನ್‌ನ ರಾಜ್ಯ ಸಂಯೋಜಕ ಮೊಹಮ್ಮದ್ ರಫೀ ಹೇಳಿದ್ರು. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಗೌರವಾನ್ವಿತ ಉದ್ಯೋಗವನ್ನು ನೀಡಬೇಕೆಂದು ಆಗ್ರಹಿಸಿ ಈ ಚಳುವಳಿ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ದೇಶ್ ಕಿ ಬಾತ್ ಫೌಂಡೇಶನ್ ಕೂಡ ಬೆಂಬಲ ಸೂಚಿವಿ ಚಳುವಳಿಯಲ್ಲಿ ಭಾಗಿಯಾಗಲಿದೆ ಎಂದು ತಿಳಿಸಿದ್ರು.