ಇಂದಿನ ಸ್ಥಳೀಯ ರಾಜಕೀಯ ಸುದ್ದಿಗಳು

ಬಿಎಸ್‌ವೈ ನಿರ್ಧಾರದ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ

ಶಿವಮೊಗ್ಗ : ಯಡಿಯೂರಪ್ಪ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಆದ್ರೆ ಅವರು ಏನೇ ನಿರ್ಧಾರ ತೆಗೆದುಕೊಂಡ್ರು ರಾಜ್ಯ ಹಾಗೂ ಪಕ್ಷದ ಹಿತದೃಷ್ಟಿಯಿಂದಲೆ ತೆಗೆದುಕೊಂಡಿರ್‍ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ನಿರ್ಧಾರದ ಬಗ್ಗೆ ಕೇಂದ್ರದ ನಾಯಕರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕೇಂದ್ರದ ನಾಯಕರ ಒಪ್ಪಿಗೆ ಪಡೆದುಕೊಳ್ಳುವ ವಿಶ್ವಾಸದ ಮೇಲೆಯೇ ಯಡಿಯೂರಪ್ಪ ಹೀಗೆ ಹೇಳಿದ್ದಾರೆ ಎಂದರು. ಇನ್ನು ಸಚಿವ ಸಂಪುಟಕ್ಕೆ ಈಶ್ವರಪ್ಪ ಮತ್ತೆ ಸೇರ್‍ತಾರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಒಂದು ವ್ಯವಸ್ಥೆ ಇದೆ. ಕೇಂದ್ರದ ನಾಯಕರು, ಮುಖ್ಯಮಂತ್ರಿಗಳು ಸಚಿವ ಸಂಪುಟದ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅವರು ಏನೇ ತೀರ್ಮಾನ ತೆಗೆದುಕೊಂಡ್ರು ಪಕ್ಷದ ಕಾರ್ಯಕರ್ತನಾಗಿ ನಾನು ಬದ್ಧನಾಗಿರ್‍ತೇನೆ ಎಂದು ಹೇಳಿದ್ರು.

ಪಾಲಿಕೆ ವಿಪಕ್ಷ ನಾಯಕಿಯಾಗಿ ರೇಖಾ ರಂಗನಾಥ್ ಅಧಿಕಾರ ಸ್ವೀಕಾರ

ಶಿವಮೊಗ್ಗ: ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿಯಾಗಿ ರೇಖಾ ರಂಗನಾಥ್ ಅಧಿಕಾರ ಸ್ವೀಕರಿಸಿದ್ರು. ಪಾಲಕೆಯಲ್ಲಿ ನಡೆದ ಅಧಿಕಾರಿ ಸ್ವೀಕಾರ ಕಾರ್ಯಕ್ರಮದಲ್ಲಿ ನೂತನ ವಿರೋಧ ಪಕ್ಷದ ನಾಯಕಿಗೆ ಶುಭಾಶಯ ಕೋರಿದ್ರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಪಾಲಿಕೆ ಮೇಯರ್ ಸುನೀತ ಅಣ್ಣಪ್ಪ, ಉಪ ಮೇಯರ್ ಗನ್ನಿ ಶಂಕರ್ ಸೇರಿದಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಹಾಗೂ ಮತ್ತಿತರ ಪ್ರಮುಖರು ಅಭಿನಂದನೆ ಸಲ್ಲಿಸಿದ್ರು.