21-07-2022 ಪ್ರಮುಖ ಪ್ರತಿಭಟನೆಗಳು

ಪ್ರತಿಭಟನೆ ನಡೆಸಿ ಎಸ್‌ಡಿಪಿಐ ಆಕ್ರೋಶ

ಶಿವಮೊಗ್ಗ : ಜಿಎಸ್‌ಟಿ ತೆರಿಗೆಯಿಂದಾಗಿ ಮೊಸರು, ಮಜ್ಜಿಗೆ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ ನಡೆಸಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭನೆ ನಡೆಸಿರುವ ಎಸ್‌ಡಿಪಿಐ ಕಾರ್ಯಕ್ರರ್ತರು, ಕೇಂದ್ರದ ತೆರಿಗೆ ನೀತಿ ಬಡವರ ತಿನ್ನುವ ಅನ್ನಕ್ಕು ಕುತ್ತು ತಂದಿದೆ. ಪೆಟ್ರೋಲ್,ಡಿಸೇಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರ ಬದುಕು ಜಿಎಸ್‌ಟಿಯಿಂದ ಮತ್ತಷ್ಟು ಸಂಕಷ್ಟ ಎದುರಾಗಿದೆ. ಸರ್ಕಾರ ಹಗಲು ದರೋಡೆ ಮಾಡ್ತಾಯಿದೆ. ಇದು ಹೀಗೆ ಮುಂದುವರೆದರೆ ಶ್ರೀಲಂಕಾಗೆ ಬಂದ ಸ್ಥಿತಿಯೇ ಭಾರತಕ್ಕೂ ಬರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. 


ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ

ಶಿವಮೊಗ್ಗ : ಅಗತ್ಯ ವಸ್ತುಗಳ ಮೇಲೆ ಜೆಎಸ್‌ಟಿ ತೆರಿಗೆ ವಿಧಿಸಿರುವ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆ ಸರ್ಕಾರದ ಕ್ರಮವನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿದೆ. ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೂರೆಂಟು ಭರವಸೆ ನೀಡಿತ್ತು. ಅದರಲ್ಲಿ ಮುಖ್ಯವಾಗಿ ಜನರಿಗೆ ಹೊರೆಯಾಗಿರುವ ಬೆಲೆ ಏರಿಕೆಯನ್ನು ಕಡಿಮೆ ಮಾಡುವ ಆಶ್ವಾಸನೆ ನೀಡಿತ್ತು. ಆದ್ರೆ ಮೋದಿ ಸರ್ಕಾರ ಅಧಿಕಾರಕ್ಕೆ ಬರ್‍ತಾಯಿದ್ದ ಹಾಗೇ ಹಿಂದಿನ ಸರ್ಕಾರಗಳಿಗಿಂತ ಬೆಲೆ ಏರಿಕೆ ಹೆಚ್ಚಾಗಿದೆ. ಮೊಸರು, ಮಜ್ಜಿಗೆ, ಅಕ್ಕಿ ಸೇರಿದಂತೆ ಜನರಿಗೆ ಪ್ರತಿನಿತ್ಯ ಅಗತ್ಯವಿರುವ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿರೋದು ಜನರ ಬದುಕಿಗೆ ಮತ್ತಷು ಹೊರೆಯಾಗಲಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು.


ರಾಜ್ಯ ಸರ್ಕಾರಿ ನೌಕರರ ಸಂಘ ವಜಾಗೊಳಿಸಿ

ಶಿವಮೊಗ್ಗ : ರಾಜ್ಯ ಸರ್ಕಾರಿ ನೌಕರರ ಸಂಘವನ್ನು ವಜಾಗೊಳಿಸುವಂತೆ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಆಗ್ರಹಿಸಿದ್ರು. ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿರುವ ಅವರು ರಾಜ್ಯದಲ್ಲಿ ಎಲ್ಲಾ ಸರ್ಕಾರವು ಸರ್ಕಾರಿ ನೌಕರರ ಹಾಗೂ ಅವರ ಕುಟುಂಬಗಳ ಹಿತವನ್ನು ಕಾಪಾಡುತ್ತಾ ಬಂದಿವೆ. ಮುಂದೆಯೂ ಕಾಪಾಡುತ್ತವೆ. ಇದಕ್ಕಾಗಿ ಸರ್ಕಾರಿ ನೌಕರರ ಸಂಘದ ಅವಶ್ಯಕತೆ ಇಲ್ಲ ಹಾಗೂ ಈ ಸಂಘದಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಿದೆ ಆದ್ದರಿಂದ ತಾವುಗಳು ಈ ಕುರಿತು ಪರಿಶೀಲನೆ ನಡೆಸಿ ನೌಕರರ ಸಂಘವನ್ನು ವಜಾ ಮಾಡಬೇಕೆಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ರು.