ರಾಗಿಗುಡ್ಡ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ವಿರೋಧ
ಶಿವಮೊಗ್ಗ : ರಾಗಿಗುಡ್ಡ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ದೇವಸ್ಥಾನದ ಅರ್ಚಕರ ಕುಟುಂಬ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿರುವ ಅರ್ಚಕರ ಕುಟುಂಬ ಹಲವಾರು ವರ್ಷಗಳಿಂದ ದೇಗುಲದಲ್ಲಿ ಸೇವೆ ಮಾಡುತ್ತಿದ್ದೇವೆ. ನಾವು ಇರೋದಕ್ಕೆ ದೇವಸ್ಥಾನವಿದೆ. ಇಲ್ಲ ಅಂದಿದ್ರೆ ಅಲ್ಲಿ ದೇವಸ್ಥಾನವೇ ಇರ್ತಾ ಇರಲಿಲ್ಲ. ಇದೀಗ ಹಳೇ ಕಾಲದ ದೇವಸ್ಥಾನವನ್ನು ಕೆಡವಲು ಹೊರಟಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ. ಆ ದೇವಸ್ಥಾನ ಹಾಗೇ ಇರಲಿ. ಬೇಕಿದ್ದರೆ ಬೇರೆ ಜಾಗದಲ್ಲಿ ಅಭಿವೃದ್ಧಿ ಮಾಡಿಕೊಳ್ಳಲಿ ಎಂದು ಆಗ್ರಹಿಸಿದ್ರು. ಮಾಧ್ಯಮಗೋಷ್ಠಿಯಲ್ಲಿ ರಾಘವೇಂದ್ರ, ಗಜೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ರು.
ಜುಲೈ ೨೪ರಂದು ಗುರುವಂದನಾ ಕಾರ್ಯಕ್ರಮ ಆಯೋಜನೆ
ಶಿವಮೊಗ್ಗ : ಪೂಜಾರ್ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಟೆಕ್ನಾಲಜಿ ಸಂಸ್ಥೆಯ ವತಿಯಿಂದ ಜುಲೈ ೨೪ರಂದು ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಂಸ್ಥೆಯ ಟ್ರಸ್ಟಿ ರಾಜೀವ್ ಪೂಜಾರ್ ಭಾನುವಾರ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜನಪ್ರೀಯ ಹಿಂದೂಸ್ಥಾನಿ ಗಾಯಕ ಪಂಡಿತ್ ಗಣಪತಿ ಭಟ್ ಆಗಮಿಸಲಿದ್ದಾರೆ. ನೀವೃತ್ತ ಡಿಸಿಪಿ ಪ್ರಕಾಶ್ ಮೂಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆ ಬೆಳಗ್ಗೆ ೯ರಿಂದ ಸಂಜೆ ೫ರವರೆಗೆ ಅಕಾಡೆಮಿಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಇರಲಿದೆ. ಬಳಿಕೆ ಸಂಜೆ ೫ರಿಂದ ೫.೩೦ರತನಕ ಸಭಾ ಕಾರ್ಯಕ್ರಮ ಜರುಗಲಿದೆ. ಆನಂತರ ಪಂಡಿತ್ ಗಣಪತಿ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದ್ರು.
ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಶಿವಮೊಗ್ಗ : ಖಾಯಂಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜುಲೈ ೨೬ ರಿಂದ ೨೮ ರ ವರೆಗೆ ಪಾರ್ಲಿಮೆಂಟ್ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ತುಳಸಿಪ್ರಭಾ ಹೇಳಿದರು. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು
ಕಳೆದ ಹಲವು ವರ್ಷಗಳಿಂದ ಭದ್ರತೆಗಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ರಾಜಧಾನಿಯಲ್ಲೂ ಉಪವಾಸ ಸತ್ಯಾಗ್ರಹ ಮಾಡಿದ್ದಾರೆ. ಸರ್ಕಾರ ಇವರ ಹೋರಾಟವನ್ನೂ ಕಸಿದುಕೊಂಡಿದೆ. ಹೋರಾಟ ಮಾಡಿದವರ
ಮೇಲೆ ಕೇಸ್ ಗಳನ್ನು ಹಾಕಲಾಗುತ್ತಿದೆ. ಇದರ ವಿರುದ್ಧ ಮತ್ತೆ ಮತ್ತೆ ಧ್ವನಿ ಎತ್ತಬೇಕಾದುದು ಅನಿವಾರ್ಯವಾಗಿದೆ. ಈ ಕಾರಣದಿಂದಲೇ ಪಾರ್ಲಿಮೆಂಟ್ ಚಲೋ ಆಯೋಜಿಸಲಾಗಿದೆ ಎಂದರು.
ಆಭರಣ ಪ್ರೀಯರಿಗೆ ಶುಭಸುದ್ದಿ...
ಶಿವಮೊಗ್ಗ : ಆಭರಣ ಪ್ರೀಯರಿಗೆ ಇಲ್ಲಿದೆ ಶುಭಸುದ್ದಿ...ವಜ್ರ ಮತ್ತು ಚಿನ್ನದ ಆಭರಣಗಳನ್ನು ಖರೀಧಿಸಲು ಶಿವಮೊಗ್ಗ ಜನತೆಗೆ ಇಲ್ಲಿದೆ ಒಂದು ಸದಾವಕಾಶ.. ಹೌದು ಜುಲೈ ೨೩ ಹಾಗೂ ೨೪ ರಂದು ಕೀರ್ತಿಲಾಲ್ಸ್‌ನಿಂದ ವಜ್ರ ಮತ್ತು ಚಿನ್ನದ ಆಭರಣಗಳ ಪ್ರದರ್ಶನ ಮೇಳ ಹಾಗೂ ಮಾರಾಟ ಶಿವಮೊಗ್ಗದಲ್ಲಿ ನಡೆಯಲಿದೆ. ಗ್ಲೂಮಿಂಗ್ ಗುರುಕುಲದ ಸಹಯೋಗದೊಂದಿಗೆ ನಗರದ ರಾಯಲ್ ಆರ್ಕಿಡ್ ಸೆಂಟ್ರಲ್ ಗ್ರ್ಯಾಂಡ್‌ನಲ್ಲಿ ಈ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಬೆಳಗ್ಗೆ ೧೦ರಿಂದ ರಾತ್ರಿ ೮ರವರೆಗೆ ಮಾರಾಟ ಹಾಗೂ ಪ್ರದರ್ಶನ ನಡೆಯಲಿದ್ದು, ವಿಶೇಷ ವಿನ್ಯಾಸಗಳ ಬಳೆಗಳು, ನಕ್ಲೇಸ್ ಸೆಟ್‌ಗಳು, ಕಿವಿಯೋಲೆ, ಉಂಗುರ ಸೇರಿದಂತೆ ಮತ್ತಿತರ ವಜ್ರ ಹಾಗೂ ಚಿನ್ನದ ಆಭರಣಗಳು ಇಲ್ಲಿ ದೊರೆಯಲಿವೆ ಎಂದು ಮೇಳದ ಆಯೋಜಕರು ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು.
ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕರಿಯಣ್ಣ ಆಕ್ರೋಶ
ಶಿವಮೊಗ್ಗ : ದಿನ ಬಳಕೆಯ ಅನೇಕ ವಸ್ತುಗಳ ಮೇಲೆ ಜಿಎಸ್‌ಟಿ ತೆರಿಗೆ ಹೇರುವ ಮೂಲಕ ಕೇಂದ್ರ ಸರ್ಕಾರ ಜನರ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕರಿಯಣ್ಣ ಆಕ್ರೋಶ ವ್ಯಕ್ತಪಡಿಸಿದ್ರು. ಈ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊಸರು, ಮಜ್ಜಿಗೆ, ಸೇರಿದಂತೆ ಮತ್ತಿತರ ಹಾಲಿನ ಉತ್ಪನ್ನಗಳು ಹಾಗೂ ಅಕ್ಕಿ, ಗೋಧಿಯಂತಹ ಧವಸ ಧಾನ್ಯಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಕೂಡ ಏರಿಸಿದೆ. ಕೇಂದ್ರ ಸರ್ಕಾರ ಈ ರೀತಿಯಾಗಿ ಪ್ರತಿಯೊಂದು ವಸ್ತಗಳ ಬೆಲೆ ಏರಿಸುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿದೆ. ಬಿಜೆಪಿ ಸರ್ಕಾರದಲ್ಲಿ ಜನಸಾಮಾನ್ಯರು ಬದುಕೋದೆ ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.