ಶಿವಮೊಗ್ಗ : ಶಿವಮೊಗ್ಗ ಡಿಸಿಸಿ ಬ್ಯಾಂಕ್ ವತಿಯಿಂದ ನಾಡಿನ ಸಮಸ್ತ ಜನತೆಗೆ ಕ್ರಿಸ್‌ಮಸ್, ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಶುಭಾಷಯಗಳನ್ನ ಕೋರಿ ೨೦೨೨ನೇ ಸಾಲಿನ ಕ್ಯಾಲೆಂಡರ್ ಹಾಗು ಡೈರಿ ಬಿಡುಗಡೆ ಮಾಡಲಾಯಿತು.
ಈ ಕುರಿತಾಗಿ ನಮ್ಮ ವಾಹಿನಿ ಜೊತೆ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ನಮ್ಮ ಬ್ಯಾಂಕಿನಲ್ಲಿ ೧೭೭ ನೌಕರರಿದ್ದಾರೆ. ಆ ಎಲ್ಲಾ ನೌಕರರು ಹಾಗೂ ಅವರ ಕುಟುಂಬದ ಮೂವರು ಸದಸ್ಯರನ್ನ ಸೇರಿ ಒಟ್ಟು ೬೨೦ ಜನಕ್ಕೆ ೫ ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ಮಾಡಿಸಲಾಗಿದೆ. ಮಹಿಳಾ ಸಿಬ್ಬಂದಿಗೆ ಹೆರಿಗೆಗೆ ಸಂಬಂಧಿಸಿದಂತೆ ೩೦ ಸಾವಿರ ಇನ್ಷುರೆನ್ಸ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.