ಸೊರಬ : ಮಾಜಿ ಶಾಸಕ ಮಧು ಬಂಗಾರಪ್ಪ ನೇತೃತ್ವದಲ್ಲಿ ದೇಶದ ಏಕತೆಗಾಗಿ ನಡಿಗೆ ಜನಜಾಗೃತಿ ಪಾದಯಾತ್ರೆ ನಡೆಯಿತು. ಬಿಳುವಾಣಿಯಿಂದ ಸೊರಬ ಪಟ್ಟಣದ ತನಕ ನಡೆದ ೧೫ ಕಿಲೋ ಮೀಟರ್ ಪಾದಯಾತ್ರೆಯಲ್ಲಿ ಮಧು ಬಂಗಾರಪ್ಪ ಕುಟುಂಬ ಕೂಡ ಭಾಗಿಯಾಗಿತ್ತು.
ಮಳೆಯ ನಡುವೆಯೇ ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ರು. ಹಲವು ಗ್ರಾಮಗಳಲ್ಲಿ ಆರತಿ ಎತ್ತಿ ಮಧುಬಂಗಾರಪ್ಪಗೆ ಸ್ವಾಗತ ಮಾಡಿದ್ರು. ಕಂಕಣ ಹಾಗೂ ರಾಕಿ ಕಟ್ಟಿ ಪಾದಯಾತ್ರೆಗೆ ಮಹಿಳೆಯರು ಶುಭಕೋರಿದ್ರು. ಈ ವೇಳೆ ಮಾತಾಡಿದ ಮಧು ಬಂಗಾರಪ್ಪ, ಪ್ರೀತಿ, ವಿಶ್ವಾಸದಿಂದ ಪಕ್ಷವನ್ನು ಕಟ್ಟೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಅವರು ಕರೆ ನೀಡಿದರು.
.jpg)
.jpg)
.jpg)
.jpg)
.jpg)
.jpg)
