ಶಿವಮೊಗ್ಗ : ಪದವೀಧರರ ಸಹಕಾರ ಸಂಘ 2020 - 21ನೇ ಸಾಲಿನಲ್ಲಿ 127.36 ಕೋಟಿ ವ್ಯವಹಾರ ನಡೆಸಿ 1.58 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
2022 ನೇ ಸಾಲಿನ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಂಘದಲ್ಲಿ 6468 ಸದಸ್ಯರಿದ್ದು, 3.01 ಕೋಟಿ ನಿವ್ವಳ
ಷೇರು ಬಂಡವಾಳ ಹೊಂದಿದ್ದು, ಆಪತ್ ಧನ ನಿಧಿಯಲ್ಲಿ 2.16 ಕೋಟಿ ಹಾಗೂ ಕಟ್ಟಡ ನಿಧಿಯಲ್ಲಿ 2.66 ಕೋಟಿ ಮತ್ತು ಇತರೆ ನಿಧಿಗಳಲ್ಲಿ 2.4 ಕೋಟಿ ಇದೆ ಹಾಗೂ ಸದಸ್ಯರಿಂದ 52.23 ಕೋಟಿ ಠೇವಣಿ ಸಂಗ್ರಹಿಸಿದ್ದು 44.88 ಕೋಟಿ ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಜೊತೆಗೆ ಈ ವರ್ಷ ಸಂಘವು ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲಿದೆ. ಆದ್ದರಿಂದ ಈ ಸವಿನೆನಪಿಗಾಗಿ ಸಂಘದ ಶಾಖಾ ಕಚೇರಿ ಹಾಗೂ ಉದ್ದೇಶಿತ ಶಿಕ್ಷಣ ಸಂಸ್ಥೆ ಆಡಳಿತ ಕಚೇರಿಗಾಗಿ ಸ್ವಂತ ಕಟ್ಟಡ ನಿರ್ಮಿಸಲಿದೆ. ಹಾಗೆಯೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ., ಎಂ.ಕಾಂ., ಮತ್ತು ಎಂ.ಎಸಿ ಗಣಿತ ವಿಭಾಗದಲ್ಲಿ ಎಂಎಸ್ಸಿ, ಈ ಮೂರು ವಿಭಾಗಗಳಲ್ಲಿ ತಲಾ 1 ಲಕ್ಷ ರೂ.ಗಳಂತೆ ಒಟ್ಟು 10 ಲಕ್ಷ ರೂ.ಗಳನ್ನು ಸಂಘದ ಹೆಸರಿನಲ್ಲಿ ಮೂರು ದತ್ತಿನಿಧಿ ಸ್ಥಾಪಿಸಿ ಪ್ರತಿವರ್ಷ ಈ ವಿಷಯಗಳಲ್ಲಿ ಪ್ರಥಮ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಸಮಾರಂಭದಲ್ಲಿ ಸ್ವರ್ಣ ಪದಕ ನೀಡುವಂತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
.jpg)
.jpg)
.jpg)
.jpg)
.jpg)
.jpg)
