ಆಗುಂಬೆಯಲ್ಲಿ ಮತ್ತೆ ಕಾಡಾನೆ ಕಾಟ 

ಹೈಲೆಟ್ಸ್ : 

ಆಗುಂಬೆಯಲ್ಲಿ ಮತ್ತೆ ಕಾಡಾನೆ ಕಾಟ 
ಸ್ಥಳೀಯರಲ್ಲಿ ಶುರುವಾಯ್ತು ಆತಂಕ 
ಒನಕೆ ಅಬ್ಬಿ ಫಾಲ್ಸ್ ಬಳಿ ಕಾಡಾನೆ ಪ್ರತ್ಯಕ್ಷ 

ಆಗುಂಬೆ : ಆಗುಂಬೆಯ ಅರಣ್ಯ ಇಲಾಖೆಯ ತಪಾಸಣಾ ಶಿಬಿರದ ಕೂಗಳತೆ ದೂರದಲ್ಲಿ ಕಾಡಾನೆ ಮತ್ತೆ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿದೆ. ಆಗುಂಬೆಯಲ್ಲಿ ಕಾಡಾನೆಯ ಹಾವಳಿ ಆರಂಭವಾಗಿ ಹಲವು ವರ್ಷಗಳು ಕಳೆದಿವೆ.

ಇದೀಗ ಒನಕೆ ಅಬ್ಬಿ ಫಾಲ್ಸ್ ಸಮೀಪ ಕಾಡಾನೆ ಪ್ರತ್ಯಕ್ಷವಾಗಿರೋದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಹೆಬ್ರಿ ರಸ್ತೆಯಿಂದ ಮಲ್ಲಂದೂರು ಕಡೆಗೆ ಹಾದು ಹೋಗಿದೆ. ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಒಂಟಿ ಸಲಗದ ಹಾವಳಿ ಇದೆ ಎಂದು ಸ್ಥಳೀಯರು ಹೇಳ್ತಾ ಇದ್ರು. ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರಗೂ ದೂರು ನೀಡಲಾಗಿತ್ತು. ಇದೀಗ ಮತ್ತೆ ಆನೆ ಪ್ರತ್ಯಕ್ಷವಾಗಿರೋದು ಅನ್ನದಾತರ ಆತಂಕಕ್ಕೆ ಕಾರಣವಾಗಿದೆ.