ಹೈಲೆಟ್ಸ್ :
ಮನೆಯಲ್ಲಿ ಜಿಂಕೆ ಸಾಕಿದ್ದ ವ್ಯಕ್ತಿ ವಿರುದ್ಧ ಪ್ರಕರಣ
ಶಿರಾಳಕೊಪ್ಪ ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಬಿಲಾಲ್
ಜಿಂಕೆ ಸಾಕುತ್ತಿದ್ದ ಆರೋಪ ಹಿನ್ನೆಲೆ ಪ್ರಕರಣ ದಾಖಲು
ಅರಣ್ಯ ಇಲಾಖೆಯ ಅಧಿಕಾರಿಗಳ ದಾಳಿ
ಜಿಂಕೆ ವಶ, ಇಬ್ಬರು ಆರೋಪಿಗಳ ಬಂಧನ
ಶಿರಾಳಕೊಪ್ಪ : ಮನೆಯಲ್ಲಿ ಜಿಂಕೆ ಸಾಕಿದ್ದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾದ ಘಟನೆ ಶಿರಾಳಕೊಪ್ಪದಲ್ಲಿ ನಡೆದಿದೆ. ಇಲ್ಲಿನ ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಬಿಲಾಲ್ ಎಂಬಾತ ತನ್ನ ಮನೆಯಲ್ಲಿ ಜಿಂಕೆ ಸಾಕಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿದ್ದಾರೆ. ಹಾಗೇನೆ ವನ್ಯಜೀವಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ಜಬೀವುಲ್ಲಾ, ದಸ್ತಗಿರ್ ಎಂಬಾತನನ್ನು ಬಂಧಿಸಿದ್ದಾರೆ. ಜಿಂಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.